Tuesday, October 2, 2012

ವಯಸ್ಸಾದಂತೆಲ್ಲಾ ಕನಸು ಕಾಣುವ ತೀವ್ರತೆ ಕಡಿಮೆಯಾಗುತ್ತದೆಯೇನೊ. ಅಥವಾ ಹೆಚ್ಚು ವಾಸ್ತವದೆಡೆಗೆ ಮುಖ ಮಾಡಿರುತ್ತೇವೆಯೋ!?
ಬಾಲ್ಯ ಯೌವ್ವನದ ಹುಮ್ಮಸ್ಸು, ಆ ಸಮಯದಲ್ಲಿ ಕಾಣುವ ಕನಸಿನಲ್ಲೇ ಇದೆಯೇನೊ ಎಂದು ಒಮ್ಮೆಯಾದರೂ ಅನಿಸದೇ ಇರದು.
"ಕನಸು ಕಾಣದವನು ಏನನ್ನು ಸಾಧಿಸಲಾರ" ಎಂಬ ಮಾತು ಕನಸುಗಳೇ ಇಲ್ಲವೇನೊ ಎನಿಸಿದಾಗ ತಳಮಳ ಹುಟ್ಟಿಸುತ್ತದೆ.
ನಿರಂತರ ಕೆಲಸ ಕಾರ್ಯಗಳ ನಡುವೆ ಕನಸು ಕಾಣುವ ರೊಮಾಂಚಕತೆಯನ್ನೆ ಕಳೆದುಕೊಂಡಿರುವೆನೇನೊ ಎನಿಸುತ್ತದೆ.
ಬರೇ ಕನಸನ್ನೆ ಕಾಣುತ್ತಿದ್ದರೆ ಎನು ಬಂತು? ಎನನ್ನಾದರೂ ಸಾಧೀಸಬೇಕಲ್ಲ!
ಬದುಕು ನಿರ್ಧಿಷ್ಟ ದಿಕ್ಕನ್ನು ಹಿಡಿದು ಹೊರಟಾಗ ಕನಸು ಬೇಕಿಲ್ಲವೇನೊ
ಅನಿಶ್ಚಿತತೆ ಅಥವಾ ಸಾವಿರಾರು ಅವಕಾಶಗಳೇ ಕನಸಿನ ಮೂಲವೇ?

2 comments:

  1. vayassadante namma bagge... namma jiivanada bagge kaanuva kanasigintaluu .... namma makkala bagge kanasu kaanuvadu sahajaveno.... yaakendre.... obba jiivanadalli taaanu enu saadhisade hoodaruu... tamma makkalu enaadradu saadhisali ennuva aakaankshe .... kanasina innondu maggalu....

    ReplyDelete
  2. ಮಕ್ಕಳಿಗೆ ಬುದ್ದಿ ಹೇಳುವ, ಅವರನ್ನು ಬೈದು ತಿದ್ದಿ ಹೇಳುವ ಸ್ವಾತಂತ್ರ್ಯವನ್ನು ಪಾಲಕರು ಕಳೆದುಕೊಳ್ಳುತ್ತಿರುವ ಇಂದಿನ ಕಾಲದಲ್ಲಿ ಮಕ್ಕಳ ಕುರಿತಾಗಿ ಕನಸು ಕಾಣುವದು ಎಷ್ಟು ಸರಿ. ಮಕ್ಕಳ ವಿಷಯದಲ್ಲಿ ಕೇವಲ ಕರ್ತವ್ಯ ಪಾಲನೆಯ ಬಾವವನ್ನಷ್ಟೇ ಉಳಿಸಿಕೊಂಡರೆ ಸಮಂಜಸವೇನೋ.
    ಆದರೆ ದಿನಕಳೆದಂತೆ ನಮ್ಮಲ್ಲಿ ಉದಿಸುವ ವಾಸ್ತವಿಕ ಬಾವ ನಮ್ಮಲ್ಲಿನ ಪ್ರಬುದ್ಧತೆಯನ್ನು ತೋರಿಸುತ್ತದೆ. "every hindu become a sanyaasi after compliting his sixty years" ಎಂಬ ಉಕ್ತಿಯ ಬಾವದೆಡೆಗಿನ ನಡೆಯಿರಬಹುದು.

    ReplyDelete