ಭೃಷ್ಟಚಾರವನ್ನು ದೂರಮಾಡಬೇಕೆಂದು ದೇಶದಲ್ಲಿ ನಡೆಯುತ್ತಿರುವ ಆಂದೋಲನ ಬಹುಶಃ ಎಲ್ಲರ ಗಮನಕ್ಕೆ ಬಂದಿರಲೇ ಬೇಕು.
ಅತಿಯಾದ ಮಾಹಿತಿಯಿಂದಾಗಿ ಜನಸಾಮಾನ್ಯರು ಗೊಂದಲಿಕ್ಕಡಾಗುತ್ತಿದ್ದಾರೆನೋ ಎಂಬುದು ನನ್ನ ಅಭಿಪ್ರಾಯ. ಏಕೆಂದರೆ ಬೃಷ್ಟಚಾರ ನಡೆಯುತ್ತಿದೆ, ಮತ್ತು ಯಾವ ರೀತಿ, ಪ್ರಮಾಣಗಳಲ್ಲಿ ನಡೆಯುತ್ತಿದೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ. ಆದರೆ ಅದಕ್ಕೆ ಪರಿಹಾರ ಏನು?
ಅದೊಂದು ಅರಿಯದ ಸಾಮಾನ್ಯ ಅದಕ್ಕಾಗಿ ಅಣ್ಣಾ ಹಜಾರೆ ಮತ್ತು ಬಾಬಾ ರಾಮದೇವ ಅವರ ಬೆನ್ನಿಗೆ ನಿಂತಿದ್ದಾರೆ. ಬಹುಶಃ ಅವರ ಸ್ಥಾನದಲ್ಲಿ ಯಾರೇ ಇದ್ದರೂ ಜನ ಅವರ ಬೆನ್ನು ಬೀಳುತ್ತಿದ್ದರೇನೊ. ಮಾದ್ಯಮಗಳು ಪಕ್ಷ ಸಂಘಟನೆಗಳ ಮುಖವಾಣಿಯಾಗಿರುವಾಗ ದೂರದರ್ಶನದಲ್ಲಾಗಲಿ ಪತ್ರಿಕೆಗಳಲ್ಲಾಗಲಿ ವಸ್ತುನಿಷ್ಟ ಮಾಹಿತಿ ದೊರಕುತ್ತಿದೆ ಎಂಬ ವಿಶ್ವಾಸವಿಲ್ಲ.ಆದುದರಿಂದ ಸತ್ಯಾಗ್ರಹ ದಿಕ್ಕು ತಪ್ಪುತ್ತಿದೆಯೇನೊ!!
ಸಮಾನ್ಯ ಜನರ ಬೆಂಬಲ ಗಳಿಸಿದ ಸತ್ಯಾಗ್ರಹವೊಂದು ರಾಜಕೀಯ ಹಿತಾಸಕ್ತಿಗಳಿಗೆ ಬಲಿಯಾಗುತ್ತಿರುವುದು ನೋವು ತರುವ ವಿಷಯ. ಇಂದು ಪ್ರಾಮಾಣಿಕರಿಗೆ ಸತ್ಯಸಂದರಿಗೆ ಓಟು ನೀಡಬೇಕೆಂಬ ಆಶಯವಿದ್ದರೂ ಅಂತವರು ಚುನಾವಣಾ ಕಣದಲ್ಲಿ ಸಿಗದ ಕಾರಣ ತನ್ನ ವಯಕ್ತಿಕ ಹಿತಾಸಕ್ತಿಯ ಕುರಿತಾಗಿ ಮತದಾರ ಯೋಚಿಸಬೇಕಾಗಿರುವುದು ರಾಜಕೀಯ ಮುಂದಾಳುಗಳ ದೋರಣೆಗಳಿಂದಾಗಿಯೇ ಹೊರತು ಸಾಮಾನ್ಯರ ನಡವಳಿಕೆಯಿಂದಲ್ಲ.
ಬಾಬಾ ರಾಮದೇವ ಅವರು ಸತ್ಯಾಗ್ರಹಕ್ಕೆ ಕುಳಿತ ಮೇಲೆ ಕೇಂದ್ರ ಸರಕಾರ ನಡೆದುಕೊಂಡ ರೀತಿ ಮತ್ತು ಆ ನಂತರದ ತನಿಖೆಯ ಚಟುವಟಿಕೆಗಳು ಕೇಂದ್ರ ಸರಕಾರದ ಮೇಲೆ ಸಂಶಯ ಪಡಲು ಕಾರಣವಾಗಿದೆ. ಒಂದು ವೇಳ ಬಾಬಾ ಅವರು ತೆರಿಗೆ ವಂಚಿಸಿದ್ದರೆ ಇಲ್ಲಿಯವರೆಗೆ ಯಾಕೆ ಕೇಂದ್ರ ಸರಕಾರ ಸುಮ್ಮನೆ ಕುಳಿತಿತ್ತು?
ಇನ್ನು ಸಂಘ ಪರಿವಾರ ಬಾಭಾ ರಾಮದೇವ ಅವರನ್ನು ಬೆಂಬಲಿಸಿದೆ ಅನ್ನುವದಕ್ಕಿಂತ ಕೇಂದ್ರ ಸರಕಾರ ಕಪ್ಪು ಹಣವನ್ನು ವಾಪಸ್ ತರುವಲ್ಲಿ ಮತ್ತು ರಾಷ್ಟ್ರೀಯ ಸಂಪತ್ತನ್ನಾಗಿ ಘೋಷಿಸುವಲ್ಲಿ ಇಚ್ಛಾಶಕ್ತಿಯನ್ನು ತೋರಿಸಿಲ್ಲ ಎಂಬುದೇ ಮುಖ್ಯವೆನಿಸುತ್ತದೆ.
ಒಬ್ಬ ಅಣ್ಣಾ, ಒಬ್ಬ ಬಾಬಾ ವಂಚಕರು ಎನಿಸಬಹುದು. ಆದರೆ ಅವರ ಬೆನ್ನಿಗಿರುವ ಅಸಂಖ್ಯ ಜನರು ಅಮಾಯಕತೆಯಿಂದ ಅವರನ್ನು ಬೆಂಬಲಿಸಿಲ್ಲ. ಭೃಷ್ಟಚಾರದಿಂದ ಬೇಸತ್ತು ಅವರನ್ನು ಬೆಂಬಲಿಸಿದ್ದಾರೆ.
ಆದುದರಿಂದ ಮಧ್ಯರಾತ್ರಿಯಲ್ಲಿ ನಡೆದ ದೌರ್ಜನ್ಯ ಒಪ್ಪುವಂತಹುದಲ್ಲ. ಸಮಸ್ತ ದೇಶವಾಸಿಗಳ ಆಶಯವನ್ನು ಬದಿಗೊತ್ತಿ ಒಂದು ಸರಕಾರ ಧರ್ಪದಿಂದ ಮುನ್ನಡೆಯುತ್ತದೆ ಎಂದಾದರೆ. ನಮ್ಮ ಸಂವಿಧಾನಿಕ ವ್ಯವಸ್ಥೆ ಎತ್ತ ಹೊರಟಿದೆ ಎಂಬ ಪ್ರಶ್ನೆ ಸಹಜ.
ಹಾಗದರೆ ಸಾಮಾನ್ಯರು ಯಾವುದರ ಮೇಲೆ ಭರವಸೆ ಇಡಬೇಕು. ಅಂದಿನ ಉಳಿಗಮಾನ್ಯ ವ್ಯವಸ್ಥೆಗೂ ಇಂದಿನ ಆಡಳಿತ ಶಾಹಿಗೂ ವ್ಯತ್ಯಾಸವೇನುಳಿಯಿತು?