ಸೋಮವಾರ
ನನ್ನ
ಬದುಕಿನ ಜೀವ
ಟಿಸಿಲು ಬೇರಿನ ಚಿಗುರು
ಹದಿಹೃದಯದ ಕಾವುಮಧುರಮನಸಿನ ಬಾವ
ನಮ್ಮ ಉಸಿರಿನ ಜೀವ
ಹರೆಯದ ಹಸಿವು ದಣಿವು,
ಮುದುಡಿ ಹೋಗುವ ಮೊದಲು,
ಗರಿಗೆದರುವ ಮನವು
ಸ್ಪರ್ಶಿಸಲು ಎಳೆಯ ತೊಗಲು
ಎಳೆಯ ಮಗುವಿನ ನಗುವು
ದಣಿದ ದೇಹದ ಕಸುವು
ಅರ್ಥವಾಗದ ಮೊಗವು
ಹೊಂಗನಿಸಿನ ಒಲವು
ಒಲುಮೆ ಚಿಲುಮೆಯ ಬದುಕೆ?
ಚಿಗುರಿ ಅರಳುವ ಕ್ಷಣಕೆ
ಕೇಕೆ ಹಾಕುವ ಬಯಕೆ
ಹುಟ್ಟುವುದು ಯಾಕೆ?
