Wednesday, October 10, 2012

ಇವತ್ತು west ಎಂದು ಮಾರಾಟ ಮಾಡಲ್ಪಟ್ಟ pepar ಗಾಳಿಪಟವಾಗಿ ಆಕಾಶದಲ್ಲಿ ಹಾರುವಾಗ ನಾವೇ ಕಣ್ಣರಳಿಸಿ ನೋಡುತ್ತೇವೆ. ಯಾರಲ್ಲಿ ಎಂತಹ ಪ್ರತಿಬೆ ಇರಬಹುದು ಎಂಬದು ನಮಗೆ ಗೊತ್ತಿರವುದಿಲ್ಲ. ಸೂಕ್ತ ಕಾಲಾವಕಾಶಕ್ಕಾಗಿ ಅದು ಕಾದಿರುತ್ತದೆ. ಆದ್ದರಿಂದ ಯಾರು  ಇಂದೇನಾಗಿದ್ದಾರೆ ಎಂಬುದರಿಂದ ಒಬ್ಬರನ್ನು ನಿರ್ಲಕ್ಷಿಸಬಾರದು. ಅಥವಾ ಯಾರೇ ನಮ್ಮನ್ನು ನಿರ್ಲಕ್ಷಿಸಿದರೂ ದೃತಿಗೆಡಬಾರದು.

Tuesday, October 9, 2012

ಇಂದಿನ ಪರಿಸ್ಥಿತಿಯಲ್ಲಿ, "ಹಣದಿಂದಲೇ ಎಲ್ಲವೂ ಸಾಧ್ಯವಿಲ್ಲ " ಎಂಬ ಮಾತನ್ನು ಹಣವಿರುವವನು ಹೇಳಿದರೆ ಅದಕ್ಕೆ ಮೌಲ್ಯ ಹೆಚ್ಚು

Tuesday, October 2, 2012

ವಯಸ್ಸಾದಂತೆಲ್ಲಾ ಕನಸು ಕಾಣುವ ತೀವ್ರತೆ ಕಡಿಮೆಯಾಗುತ್ತದೆಯೇನೊ. ಅಥವಾ ಹೆಚ್ಚು ವಾಸ್ತವದೆಡೆಗೆ ಮುಖ ಮಾಡಿರುತ್ತೇವೆಯೋ!?
ಬಾಲ್ಯ ಯೌವ್ವನದ ಹುಮ್ಮಸ್ಸು, ಆ ಸಮಯದಲ್ಲಿ ಕಾಣುವ ಕನಸಿನಲ್ಲೇ ಇದೆಯೇನೊ ಎಂದು ಒಮ್ಮೆಯಾದರೂ ಅನಿಸದೇ ಇರದು.
"ಕನಸು ಕಾಣದವನು ಏನನ್ನು ಸಾಧಿಸಲಾರ" ಎಂಬ ಮಾತು ಕನಸುಗಳೇ ಇಲ್ಲವೇನೊ ಎನಿಸಿದಾಗ ತಳಮಳ ಹುಟ್ಟಿಸುತ್ತದೆ.
ನಿರಂತರ ಕೆಲಸ ಕಾರ್ಯಗಳ ನಡುವೆ ಕನಸು ಕಾಣುವ ರೊಮಾಂಚಕತೆಯನ್ನೆ ಕಳೆದುಕೊಂಡಿರುವೆನೇನೊ ಎನಿಸುತ್ತದೆ.
ಬರೇ ಕನಸನ್ನೆ ಕಾಣುತ್ತಿದ್ದರೆ ಎನು ಬಂತು? ಎನನ್ನಾದರೂ ಸಾಧೀಸಬೇಕಲ್ಲ!
ಬದುಕು ನಿರ್ಧಿಷ್ಟ ದಿಕ್ಕನ್ನು ಹಿಡಿದು ಹೊರಟಾಗ ಕನಸು ಬೇಕಿಲ್ಲವೇನೊ
ಅನಿಶ್ಚಿತತೆ ಅಥವಾ ಸಾವಿರಾರು ಅವಕಾಶಗಳೇ ಕನಸಿನ ಮೂಲವೇ?