ನಾಗೇಶ ಹೆಗಡೆಯವರ "ಇರುವುದೊಂದೇ ಭೂಮಿ" ಪುಸ್ತಕವನ್ನು ಓದಿ ಬಹಳ ದಿನಗಳಾಗಿತ್ತು. ಆ ಪುಸ್ತಕದಲ್ಲಿ ಪರಿಸರ, ನಿಸರ್ಗದ ಕುರಿತಾದ ಅವರ ಚಿಂತನೆಗಳಿಂದ ಬಹಳ ಪ್ರಭಾವಿತನಾಗಿದ್ದೆ. ಅದಕ್ಕಾಗಿ ಮೊನ್ನೆ ಬೆಂಗಳೂರಿಗೆ ಹೋದಾಗ ಸಪ್ನಾ ಪುಸ್ತಕಾಲಯದಲ್ಲಿ ಅವರ ಪುಸ್ತಕಕ್ಕಾಗಿ ಹುಡುಕಾಡಿದಾಗ ಸಿಕ್ಕಿದ್ದು "ಮುಷ್ಠಿಯಲ್ಲಿ ಮಿಲೆನಿಯಮ್". ಇಂತಹುದೊಂದು ಕೃತಿ ಪ್ರಕಟವಾದ ಹತ್ತು ವರ್ಷಗಳ ನಂತರ ಓದಿದೆನಲ್ಲ ಎಂದು ಬೇಸರವಾಯಿತು.
ಮುಷ್ಠಿಯನ್ನು ಬಿಚ್ಚುತ್ತ ಹೊದಂತೆ ನಮ್ಮ ಕಲ್ಪನೆಯಲ್ಲೂ ಇಲ್ಲದ ಆದರೆ ಅತ್ಯಂತ ಸರಳವಾದ ವಿಷಯಗಳುತಳಿಯತ್ತ ಹೋಗುತ್ತವೆ. ಹೆಗಡೆಯವರ ಸಾಹಿತ್ಯವಂತೂ ಸರಳ ಸುಂದರವಾದುದು.ಈಡೀ ಕೃತಿಯಲ್ಲಿ ಮೀಲೆನಿಯಮ್ ಗತಿಸುವ ಕ್ಞಣದಲ್ಲಿ ಇರುವ ಸಮಸ್ಯೆಗಳ ಕುರಿತು ಚಂತನೆಗೆ ಹಚ್ಚುತ್ತದೆ. ಎಲ್ಲಾ ಲೇಖನಗಳು ಕೂಡಾ ಪರಿಸರ ಮತ್ತು ಪರಿಸರ ಸಂಬಂದಿ ವಿಷಯಗಳಿಗೆ ಸಂಬಂದಿಸಿದ್ದರಿಂದ ಆ ಕುರಿತಾದ ನಮ್ಮ ತಿಳುವಳಿಕೆ ವಿಸ್ತರಿಸುತ್ತದೆ.
ಈ ವಿಷಯಗಳು ಎಷ್ಟು ಗಹನವಾದುದು ಎಂಬುದನ್ನು ಓದಿಯೇ ತಿಳಿದುಕೊಳ್ಳಬೇಕು.ಪರಿಸರದ ಮೇಲಿನ ನಮ್ಮ ಶೋಷಣೆ ಯಾವ ಹಂತವನ್ನು ತಲುಪಿದೆ ಎಂಬುದು ಇಲ್ಲಿ ನೀಡಲಾದ ಅಂಕಿ ಆಂಶಗಳಿಂದ ವೇದ್ಯವಾಗುತ್ತದೆ. "ಈ ಬೂಮಿ ಮತ್ತು ಅದರ ಮೇಲಿನ ಸಂಪನ್ಮೂಲಗಳು ನಾವು ತಾತ ಮುತ್ತಾತರಿಂದ ಪಡೆದಾ ಆಸ್ತಿಯಿಲ್ಲ ಮಕ್ಕಳು ಮೊಮ್ಮಕ್ಕಳಿಂದ ಪಡೆದ ಸಾಲ " ಎಂಬ ಮಾತು ಮಾರ್ಮಿಕವಾದುದು. ಕಾರಣ ಈ ಬೂಮಿಯನ್ನು ಮುಂದಿನ ಪೀಳಿಗೆ ವಾಸಯೋಗ್ಯವಾಗಿರುವಂತೆ ನೋಡಿಕೊಳ್ಳಬೆಕಾದ ಅನಿವಾರ್ಯಅಗತ್ಯತೆ ನಮ್ಮ ಮುಂದಿದೆ.
ಪುಸ್ತಕವನ್ನು ಓದಿ ಮುಗಿಸಿದಾಗ ಯಾವ ಸಮಸ್ಯಗಳಿಗೂ ಪರಿಹಾರ ಸಿಗದಿದ್ದರೂ ಸಮಸ್ಯೆಯ ಅರಿವು ನಮ್ಮದಾಗಿರುತ್ತದೆ.ಎಲ್ಲಾ ಸಮಸ್ಯೆಗಳಿಗೂ ಎಕೈಕ ಪರಿಹಾರವೆಂದರೆ ಜನಸಂಖ್ಯಾ ನಿಯಂತ್ರಣ ಮತ್ತು ಸಂಪನ್ಮೂಲಗಳ ವಿವೇಚನಾಶೀಲ ಬಳಕೆ.
"ನಾಗರೀಕತೆಯ ಪೂರ್ವ ಸ್ಥೀತಿ ಕಾಡು ಉತ್ತರ ಸ್ಥೀತಿ ಮರಳುಗಾಡು" ಕಾರಣ ಮಾನವ ಈ ಪ್ರಪಂಚದಲ್ಲಿ ಶಾಶ್ವತವಾಗಿ ನೆಲಸಲಾಗದಿದ್ದರೂ ಅವನ ಅಟ್ಟಹಾಸ ಮಾತ್ರ ಅಸಹನೀಯವಾದುದು. ಇಂದಿನ ಎಲ್ಲ ಸಮಸ್ಯೆಗಳಿಗೂ ನಾವೇ ಕಾರಣರಾಗಿದ್ದು ಏನೂ ಮಾಡಲಾರದ ಅಸಾಹಯಕ ಸ್ಥಿತಿ ನಮ್ಮದಾಗಿದೆ