Wednesday, May 23, 2012

ಪ್ರತಿಬೆಗಳು ಗ್ರಾಮದಲ್ಲಿ ಹುಟ್ಟಿ ನಗರದಲ್ಲಿ ಸಾಯುತ್ತದೆ. ನಾವು ಬಹುಪಾಲು ಎಲ್ಲರೂ ಗ್ರಾಮೀಣ ಪ್ರದೇಶದವರೇ. ಎಲ್ಲರೂ ಹೆಚ್ಚು ಕಡಿಮೆ ನಗರದಲ್ಲೇ ಇದ್ದೇವೆ.
ನಮ್ಮಂತೆ ವಲಸೆ ಬಂದು ಹೆಚ್ಚು ಕಡಿಮೆ ಹಳ್ಳಿಗಳೆಲ್ಲಾ ಮುದಿ ಗ್ರಾಮವಾಗುತ್ತಿದೆಯೇನೋ ಎಂದೆನಿಸುತ್ತಿದೆ. ಬೇರೆ ಊರುಗಳಿಗೆ ಹೋಲಿಸಿದರೆ ನಮ್ಮೂರು ಎಷ್ಟೋ ಪಾಲು ವಾಸಿ.  ನಮ್ಮ ಸಮಕಾಲೀನರು ಸಾಕಷ್ಟು ಸಂಖ್ಯೆಯಲ್ಲಿ ಕಾಣುತ್ತಾರೆ. ಈ ಹಳ್ಳಿಗಳಿಗೆಲ್ಲಾ ಮುಂದೆ ದಿಕ್ಯಾರು.ಎಂದು ಕಾಣುತ್ತಿದೆ.
ಹಳ್ಳಿಯಲ್ಲಿ ಬದುಕು ಕಷ್ಟಕರವೆಂದು ನಮಗೆ ಅನಿಸುತ್ತಿದೆ. ಅಲ್ಲಿ ಗಳಿಕೆಯ ಅವಕಾಶವೂ ಕಡಿಮೆ. ಹಾಗೆಂದು ಹಳ್ಳಿಯ ಸಮೃದ್ದ ಪರಿಸರ ನಮಗೆ ಇಷ್ಟವಾಘುತ್ತದೆ. ಆದರೆ ಹಳ್ಳಿಗೆ ಹೋಗಿ  ನೆಲೆಸುವುದು ಸುಲಭದಲ್ಲಿಲ್ಲ. ತಾಪಾತ್ರಯಗಳೂ ಹೆಚ್ಚು. ಸಮಸ್ಯೆಯೂ ಹೆಚ್ಚು. ಜೀವನ ನಗರದಷ್ಟು ಸುಲಭವಲ್ಲ.
ಹಳ್ಳಿಗಾಡಿನ ಬದುಕು ಭವಿಷ್ಯದಲ್ಲಿ ಕಷ್ಟಕರವಾಗುಂಟು.

1 comment:

  1. ಕಷ್ಟ ಇಷ್ಟಗಳೆಲ್ಲಾ ಅವರವರ ಮನಸ್ಸಿಗೆ ಸಂಬಂಧಿಸಿದ್ದು....

    ಹೇಳಿದ್ದು ನಿಜವುಂಟು......

    ReplyDelete