Thursday, January 5, 2012

ಭರವಸೆಯ ಬೆಳಕನರಸಿ.....

ಜಗದಲ್ಲಿ ಭರವಸೆಯಿನ್ನು ಬತ್ತಿಲ್ಲ
ಮನಸು ಹೃದಯಗಳುಂಟು
ಭಾವನೆಗೆ ಬೆಲೆಯುಂಟು
ಗೌರವಿಸುವ ನಡವಳಿಕೆಯಿರುವತನಕ!

ಅಂತ್ಯದಲ್ಲಿಯೇ ಆದಿಯೂ ಇಪ್ಪಂತೆ
ನಾಶವೇ ಹೊಸ ಸೃಷ್ಟಿಯ  ಮೂಲವಂತೆ
ಸಾವು ಹೊಸಹುಟ್ಟಿಗೆ ಅವಕಾಶವಾದಲ್ಲಿ
ಹತಾಶೆಯ ಗರ್ಭದಲ್ಲಿಯೇ ಭರವಸೆ ಹುಟ್ಟದೇನು?

 ಪ್ರತಿ ಬೆಳಗಿನಲ್ಲೂ ಕತ್ತಲಿನ ತವಕ
ಪ್ರತಿ ಇರುಳಿನಲ್ಲೂ ಬೆಳಕಿಗಾಗಿ ಹುಡುಕಾಟ
ಇರುಳುಗತ್ತಲೆಗೆ ಚಂದಿರನ ಭರವಸೆಯು
ಪ್ರತಿ ಕಿರಣದಲ್ಲೂ ಸೂರ್ಯನೀಡೊ ಭರವಸೆ!?

ನಿರಾಸೆಯು ನಮ್ಮ ಧೃತಿಗೆಡಿಸದಿರಲಿ
ಭರವಸೆಯು ತನ್ನ ತಾ ಮರೆಸದಿರಲಿ
ವೈಪಲ್ಯವೇ ಉತ್ಸಾಹದ ಮೆಟ್ಟಿಲಾಗಲಿ
ಹೊಣೆಗಾರಿಕೆಯ ಪ್ರಜ್ಞೆಯೊಂದಿರಲಿ!!

No comments:

Post a Comment