ಜಡಕು ಹಗ್ಗದ ದಾರ ಇವನ ಕಾಲ ಬಿಗಿದಿಹುದು
ಧನ-ದಾಹದ ಹಿಂದೆ ದೇಶ ಹೊರಟಿಹುದು
ಅನಕ್ಷರಸ್ಥರಿವರ್, ಆಳಸಿಗಳಿವರೆಂದು
ಕಲಿತಾತ ಜರಿಯುತಿರೆ
ಸದ್ದಿರದ ಬಯಲಿನಲಿ ಖಿನ್ನಮನ ಬಾವದಲಿ
ರೈತಬಂಧುವು ತನ್ನ ತಾನರಸುತಿಹನು!?
ತನ್ನ ಹುಡುಗರಿಗೆಲ್ಲ ಹೆಚ್ಚು ಗಳಿಸುವ ಹುಚ್ಚು
ಹಳ್ಳಿ ಹಳಬರಿಗೆಲ್ಲ. ದಿಕ್ಕೆ ತೋಚದ ಕಾನು
ಸೇನಾನಿಗೆ ದೇಶ ಕಾಯುವ ಕಷ್ಟ
ತುತ್ತನಿಕ್ಕುವ ಚಿಂತೆ ಅನ್ನದಾತನಿಗೆ
ಸೊಕ್ಕಿಮೆರೆಯುವ ಮತ್ತು ಆಳುವಾತನಿಗೆ
ಅಧಿಕಾರ ಕಾಯಲಿಕ್ಕೆ ಭೃಷ್ಟಾಚಾರ!
ಧನ-ದಾಹದ ಹಿಂದೆ ದೇಶ ಹೊರಟಿಹುದು
ಅನಕ್ಷರಸ್ಥರಿವರ್, ಆಳಸಿಗಳಿವರೆಂದು
ಕಲಿತಾತ ಜರಿಯುತಿರೆ
ಸದ್ದಿರದ ಬಯಲಿನಲಿ ಖಿನ್ನಮನ ಬಾವದಲಿ
ರೈತಬಂಧುವು ತನ್ನ ತಾನರಸುತಿಹನು!?
ತನ್ನ ಹುಡುಗರಿಗೆಲ್ಲ ಹೆಚ್ಚು ಗಳಿಸುವ ಹುಚ್ಚು
ಹಳ್ಳಿ ಹಳಬರಿಗೆಲ್ಲ. ದಿಕ್ಕೆ ತೋಚದ ಕಾನು
ಸೇನಾನಿಗೆ ದೇಶ ಕಾಯುವ ಕಷ್ಟ
ತುತ್ತನಿಕ್ಕುವ ಚಿಂತೆ ಅನ್ನದಾತನಿಗೆ
ಸೊಕ್ಕಿಮೆರೆಯುವ ಮತ್ತು ಆಳುವಾತನಿಗೆ
ಅಧಿಕಾರ ಕಾಯಲಿಕ್ಕೆ ಭೃಷ್ಟಾಚಾರ!
jadaku shabdada balake..... mast iddu ha.....
ReplyDelete