ನಿರಂತರ ಕೆಲಸದ ನಡುವೆ ಬದುಕಿನ ಸೌಂದರ್ಯ ಸವಿಯಲು ಪುರುಸೊತ್ತಿಲ್ಲ. ಹಾಗೆನ್ನುವುದೇ ತಪ್ಪು ಎಂದು ನಾನು ನಂಬಿದ ಕಾಲವೊಂದಿತ್ತು. ಆದರೆ ಇಂದು ಹಾಗೆನ್ನುವದು ಯಾಕೆ ಎನ್ನುವದು ಅರ್ಥವಾಗುತ್ತಿದೆ. !!
ನಿಜವಾಗಿ ನನ್ನ ಹವ್ಯಾಸಗಳಲ್ಲಿ ಈಗ ನನ್ನ ಬಳಿಯಿರುವದು ಓದು ಮಾತ್ರ.ಅದು ಕೂಡಾ ವಾರಕ್ಕೊಮ್ಮೆ.!
ಗಾಂಧಿಜಿಯ ಸ್ವಾವಲಂಬನೆಯ ತತ್ತ್ವವನ್ನು ನನ್ನ ಬದುಕಿನಲ್ಲಿ ಪಾಲಿಸಿಕೊಂಡು ಬಂದವ ನಾನು. ನನಗೆ ತಿಳುವಳಿಕೆ ಬಂದಾಗಿಲಿನಿಂದಲೂ ನನ್ನ ಬಟ್ಟೆಯನ್ನು ನಾನೇ ತೊಳೆದುಕೊಳ್ಳುತ್ತಿದ್ದೆ ಆದರೆ ಇತ್ತೀಚೆಗೆ ಅದು ಬೇರೆಯವರ ಕೆಲಸವಾಗಿದೆ.!
ಇತ್ತೀಚಿನ ನನ್ನ ದಿನಚರಿಯೆಂದರೆ ಬೆಳಿಗ್ಗೆ ಏಳು ಗಂಟೆಗೆ ಎದ್ದು ಪ್ರಾತಃವಿಧಿಗಳನ್ನು ಮುಗಿಸಿಕೊಂಡು ಕೆಲಸಕ್ಕೆ ಹರಡುವುದು ಓಂಭತ್ತು ಗಂಟೆಗೆ. ಮದ್ಯಾಹ್ನ ಒಂದು ಘಂಟೆಯ ಒಳಗಡೆ ಊಟ ಮತ್ತು ಕಿರಿವಿಶ್ರಾಂತಿ ರಾತ್ರಿ ಕೆಲಸ ಮುಗಿಸಿ ಹೊರಡುವಾಗ ಓಂಭತ್ತು ಘಂಟೆ.!! ಬಿಡುವಿಲ್ಲದ ಕೆಲಸದ ಬಗ್ಗೆ ನನಗೆ ಬೇಸರವಿಲ್ಲ ಆದರೆ ನನ್ನ ಕನಿಷ್ಠ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸಲಾಗುತ್ತಿಲ್ಲ.
ಇವತ್ತಿನ ಕೆಲಸದ ಸ್ವರೂಪವೇ ಹಾಗೆ.
hey... kelvomme haage... baduku daariyalli... hige maadabekennuvadara saalu sahyadriyastu.... kanista arbail ghatta aadru muttonavennuvadu guri...!
ReplyDeletekeep writing brother...
thankq
ReplyDelete